ಕೆ. ಎಸ್. ಮಹದೇವಸ್ವಾಮಿ (ಜನನ:೧೯೮೬), ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿರುವ, ಕನ್ನಡ ಭಾಷೆಯಲ್ಲಿ ಬರೆಯುವ ಕಥೆಗಾರ ಮತ್ತು ಕವಿ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಸ್ವಾಮಿ ಅವರ ‛ಧೂಪದ ಮಕ್ಕಳು’ ಕಥಾಸಂಕಲನಕ್ಕೆ ೨೦೨೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿದೆ. == ವೈಯಕ್ತಿಕ ಜೀವನ == ಮಹದೇವಸ್ವಾಮಿಯಾಗಿ ಚಾಮರಾಜನಗರದ ಹನೂರು ತಾಲ್ಲೂಕಿನ ಪೊನ್ನಾಚಿ ಹಳ್ಳಿಯಲ್ಲಿ ಶಿವಣ್ಣ ಮತ್ತು ಗೌರಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಸ್ವಾಮಿ, ಶಾಲಾಶಿಕ್ಷಣವನ್ನು ಹುಟ್ಟಿದೂರಿನಲ್ಲಿ ಮುಗಿಸಿ, ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಹವ್ಯಾಸಿ ಪತ್ರಕರ್ತರಾಗಿಯೂ ಕೆಲಸ ಮಾಡಿದ ಅವರು ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. == ಪುಸ್ತಕಗಳು == ಸಾವೊಂದನು ಬಿಟ್ಟು (ಕವಿತೆಗಳು) ಧೂಪದ ಮಕ್ಕಳು (ಕತೆಗಳು) ಮುಂತಾದವು == ಪ್ರಶಸ್ತಿಗಳು == ಸಾವೊಂದನು ಬಿಟ್ಟು ಕೃತಿಗಾಗಿ - ೨೦೧೫ - 'ಕನ್ನಡ ಪುಸ್ತಕ ಪ್ರಾಧಿಕಾರ' ಬಹುಮಾನ ೨೦೧೫ - ಬೇಂದ್ರೆ ಗ್ರಂಥ ಬಹುಮಾನ ಧೂಪದ ಮಕ್ಕಳು ಕೃತಿಗಾಗಿ - ೨೦೧೮ - ಪಾಪು ಕಥಾ ಪುರಸ್ಕಾರ ೨೦೧೮ - ಛಂದ ಪುಸ್ತಕ ಪುರಸ್ಕಾರ ೨೦೧೯-ಶಾ ಬಾಲುರಾವ್ ಪ್ರಶಸ್ತಿ ೨೦೧೯-ಬಸವರಾಜ ಕಟ್ಟೇಮನಿ ಯುವ ಪುರಸ್ಕಾರ ೨೦೨೦ - ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ == ಉಲ್ಲೇಖಗಳು ==